Sunday, 15 December 2013

ನೆಲೆಸು ನಿನ್ನಾತ್ಮದಲಿ ಅದುವೆ ನಿನ್ನ ನೈಜ ತಾಣ!


ಮಾಡು ಯೋಗದ ಚಿಂತನ ಲೋಕವಾಗಲಿ ಚೈತನ್ಯದ ಮನೆತನ
ಜೀವನವೆಂದರೆ ಅಮೃತಕ್ಕಾಗಿ ಮಂಥನ ಪ್ರಯತ್ನದಲಿ ಆಗದಿರಲಿ ಪತನ
ಬಾಳಿನಲಿ ಮೂಡಲಿ ಮಧುರ ಸವಿಗಾನ
ನೆನಪಿಸಲಿ ಅದು ಕವಿಗಳ ನವಿರಾದ ಸಿಹಿಗವನ -

ಗೆಲುವಿಗೆ ಸತ್ ಸಂಕಲ್ಪಗಳ ಸಂಕಲನ, ನಿರಂತರ ಪ್ರಯತ್ನದ ಯೋಗದಾನ
ಮೌಢ್ಯದ ಮಾನಾಪಹರಣವೇ ನಿಜವಾದ ರಾಮಬಾಣ
ಬಾಳಿನಲಿ ಮೂಡಲಿ ಮಧುರ ಸವಿಗಾನ
ನೆನಪಿಸಲಿ ಅದು ಕವಿಗಳ ನವಿರಾದ ಸಿಹಿಗವನ -

ಮನಸ್ಸೊಂದು ಕ್ರೀಡಾಂಗಣ ಅಲ್ಲಿ ಸರ್ವದಾ ದುಷ್ಟ-ಶಿಷ್ಟರ ರಣ
ದುಷ್ಟರ ಮಾರಣ ಶಿಷ್ಟರ ಸಂಭ್ರಮಾಚರಣೆಯೇ ಪೂರ್ಣತೆಯೆಡೆಗೆ ಜೀವನದ ಪಯಣ
ಬಾಳಿನಲಿ ಮೂಡಲಿ ಮಧುರ ಸವಿಗಾನ
ನೆನಪಿಸಲಿ ಅದು ಕವಿಗಳ ನವಿರಾದ ಸಿಹಿಗವನ -

ನೆಲೆಸು ನಿನ್ನಾತ್ಮದಲಿ ಅದುವೆ ನಿನ್ನ ನೈಜ ತಾಣ
ಹಾದಿಹೋಗದು ಮನಸಿನಲಿ ಕಾಮಾಂಧ ಹಾಗೂ ಬೇಜವಾಬ್ದಾರಿತನ
ಬಾಳಿನಲಿ ಮೂಡಲಿ ಮಧುರ ಸವಿಗಾನ
ನೆನಪಿಸಲಿ ಅದು ಕವಿಗಳ ನವಿರಾದ ಸಿಹಿಗವನ -

No comments:

Post a Comment