ಭೋಗಸ್ವಾದವು ಕೆಣಕಿತು ನವರಸದ ಪಾಠ
ರೋಗದ ಆರ್ತನಾದವು ಜನಿಸಿತು ಕರುಣೆ ಶಾಂತರಸಗಳ ಅಂತರ್ನೋಟ
ಅಜ್ಞಾನದಿಂದ ಕೂಗಿದೆ ನಾನು ಬಾಳುವೆ ನಾನು ಬಾಳುವೆಯೆಂದು
ಸತ್ಯಶೋಧದಿ ತಿಳಿಯಿತು ನಾನು ಈಜುತ್ತಿರುವುದು ಕರ್ಮ ಕಾಲುವೆಯಲ್ಲೆಂದು
ಕರ್ಮವೇ ಸತ್ಯ ಕರ್ಮವೇ ನಿತ್ಯ ಮಿಕ್ಕೆಲ್ಲಾ ಶಿವನ ಸುಂದರ ನೃತ್ಯ
ಜೀವವು ಅಸತ್ಯ ಜೀವನ ಅನಿತ್ಯ ಮಿಕ್ಕೆಲ್ಲಾ ಶಿವನ ಸುಂದರ ಕೃತ್ಯ - ೧
ಚಂಚಲ ಮನಸ್ಸಿಗೆ ಹಣದ ಹಂಬಲ ಕೀರ್ತಿಯ ಚಪಲ ಸಂಗಾತಿಯ ಬೆಂಬಲ
ನಿಶ್ಚಲ ಮನಸ್ಸಿಗೆ ವಾಸ್ತವ್ಯವೇ ಬಲ ಕಾಮ ನಿಷ್ಫಲ ಕರ್ತವ್ಯ ಸಫಲ
ಗೊಂದಲಮಯ ಮನ ಆಗುವುದು ಸುಂದರ ಹೂವನ ಮಾಡಿದರೆ
ಅಂತರ್ನಾದದ ಶ್ರವಣ ಸತ್ಯಾಸತ್ಯತೆಯ ಮನನ ಕರ್ತವ್ಯಗಳ ಅನುಷ್ಠಾನ
ಕರ್ಮವೇ ಸತ್ಯ ಕರ್ಮವೇ ನಿತ್ಯ ಮಿಕ್ಕೆಲ್ಲಾ ಶಿವನ ಸುಂದರ ನೃತ್ಯ
ಜೀವವು ಅಸತ್ಯ ಜೀವನ ಅನಿತ್ಯ ಮಿಕ್ಕೆಲ್ಲಾ ಶಿವನ ಸುಂದರ ಕೃತ್ಯ - ೨
ಯಾರು ಕಂಡರು ಬದುಕು ಯಾರದರ ಸಾಕ್ಷಾತ್ಕಾರ
ಯಾರು ಕಂಡರು ಪ್ರೀತಿ ಯಾರದರ ಪೂರ್ಣತೆ
ಪ್ರೀತಿ ಸಾಕ್ಷಾತ್ಕಾರ ಬದುಕಿನ ಪೂರ್ಣತೆಯ ಸಾರ
ಬದುಕಿನ ಪೂರ್ಣತೆಯ ಸಾರ ಪ್ರೀತಿ ಸಾಕ್ಷಾತ್ಕಾರ
ಕರ್ಮವೇ ಸತ್ಯ ಕರ್ಮವೇ ನಿತ್ಯ ಮಿಕ್ಕೆಲ್ಲಾ ಶಿವನ ಸುಂದರ ನೃತ್ಯ
ಜೀವವು ಅಸತ್ಯ ಜೀವನ ಅನಿತ್ಯ ಮಿಕ್ಕೆಲ್ಲಾ ಶಿವನ ಸುಂದರ ಕೃತ್ಯ - ೩
Chennagidhe experience tells.
ReplyDeleteYou got it!
Delete